ಪಾಸ್‌ಪೋರ್ಟ್ ಪಡೆಯಲು ಮುಂದಾಗಿರುವವರಿಗೆ ಕೇಂದ್ರ ಸರ್ಕಾರ ಹೊಸ ಶುಲ್ಕಗಳನ್ನು ಪ್ರಕಟಿಸಿದೆ. ಪರಿಷ್ಕೃತ ದರಗಳು ಜುಲೈ 1ರಿಂದ ಜಾರಿಗೆ ಬರಲಿದ್ದು, ಹೊಸ ಅರ್ಜಿಗಳು ಹಾಗೂ ಮರುನವೀಕರಣ ಅರ್ಜಿಗಳಿಗೂ ಅನ್ವಯವಾಗಲಿವೆ.
ಪರಿಷ್ಕೃತ ದರಗಳ ಪ್ರಕಾರ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ ₹1,500ರಿಂದ ₹2,500ಕ್ಕೆ ಏರಿಕೆಯಾಗಿದೆ. ತತ್ಕಾಲ್ ಸೇವೆಗೆ ₹3,500 ಬದಲಾಗಿ ₹5,000 ಪಾವತಿಸಬೇಕಾಗುತ್ತದೆ. 60 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ ₹2,000ರಿಂದ ₹3,500ಕ್ಕೆ ಹಾಗೂ ತತ್ಕಾಲ್ ಸೇವೆಯ ಶುಲ್ಕ ₹4,000ರಿಂದ ₹6,000ಕ್ಕೆ ಹೆಚ್ಚಿಸಲಾಗಿದೆ.
ಹೊಸ ಶುಲ್ಕಗಳ ವಿವರ:
36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ – ₹2,500
36 ಪುಟಗಳ ತತ್ಕಾಲ್ ಪಾಸ್‌ಪೋರ್ಟ್ – ₹5,000
60 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ – ₹3,500
60 ಪುಟಗಳ ತತ್ಕಾಲ್ ಪಾಸ್‌ಪೋರ್ಟ್ – ₹6,000
ಈ ಬದಲಾವಣೆಯಿಂದ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಯೋಜಿಸಿರುವವರು ಹೊಸ ದರಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವುದು ಉತ್ತಮ.
0 ಕಾಮೆಂಟ್‌ಗಳು