ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಗಳಾಗುವ ಲಕ್ಷಣ ಕಾಣುತ್ತಿದೆ. ಮುಖ್ಯ ಮಂತ್ರಿ ಬದಲಾವಣೆಗೆ ಕಾಂಗ್ರೇಸ್ ವಲಯದಲ್ಲಿ ಸದ್ದಿಲ್ಲದೆ ಕಸರತ್ತು ನಡೆಯುತ್ತಿದ್ರೆ ರಾಜ್ಯ ಬಿಜೆಪಿಯಲ್ಲಿಯೂ ಸಹ ಇಂಹತದ್ದೆ ಕಸರತ್ತುಗಳು ನಡೆಯುತ್ತಿದೆ. ಆದ್ರೆ ಈಗ ಮುನ್ನಲೆಗೆ ಬಂದಿರುವುದು ಸಿದ್ದರಾಮಯ್ಯ ನವರ ಸುದ್ದಿ.
ಮೂಡಾ ಹಗರಣದ ಬಗ್ಗೆ ಕೆಲವು ದಿನಗಳ ಹಿಂದೆಯೆ ಹೋರಾಟ, ಪಾದಯಾತ್ರೆ ಎಲ್ಲವೂ ನಡೆದವು, ಈಗ ಆ ಎಲ್ಲಾ ಹೋರಾಟಗಳಿಗೂ, ಪಾದಯಾತ್ರೆಗಳಿಗೂ ಫಲ ಸಿಕ್ಕಂತಾಗಿದೆ. ಇದೀಗ ಮೂಡಾ ಹಗರಣದ ಕುರಿತು ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದು ಇದು ರಾಜ್ಯ ಸರಕಾರವನ್ನೆ ಅಳ್ಳಾಡಿಸುತ್ತಿದೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಹತ್ತಿರ ಬಂದಿದ್ದು ಹೇಗಾದರೂ ಮಾಡಿ ಪಟ್ಟವನ್ನು ಉಳಿಸಿಕೊಳ್ಳಬೇಕೆಂದು ಸಿದ್ದರಾಮಯ್ಯ ಹರಸಾಹಸ ಪಡುವಂತೆ ಮಾಡಿದೆ.
ಅದೆಲ್ಲದರ ನಡುವೆ ಮುಂದಿನ ಸಿಎಂ ಯಾರು ಎಂಬುದರ ಬಗ್ಗೆಯೂ ಕಾಂಗ್ರೇಸ್ ನಲ್ಲಿ ಒಳಗಿಂದೊಳಗೆ ಚರ್ಚೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬುದು ಹೈಕಮಾಂಡ್ ಗೆ ನುಂಗಲಾರದ ಬಿಸಿ ತುಪ್ಪುವಾಗಲಿದೆ.
ಹೈಕಮಾಂಡ್ ಮುಂದಿನ ಸಿಎಂ ಡಿಕೆಶಿಯನ್ನು ಆಯ್ಕೆ ಮಾಡಿದ್ರೆ, ನಾನು ಸಿಎಂ ಆಕಾಂಕ್ಷಿ ಎಂದು ಈಗಾಗಲೆ ಕೆಲವು ಸಚಿವರು ಕುರ್ಚಿ ಮೇಲೆ ಟವೆಲ್ ಹಾಕಿ ಸೀಟ್ ಬುಕ್ಕಿಂಗ್ ಮಾಡಿದಂತಿದೆ. ಸಿದ್ದರಾಮಯ್ಯನವರು ರಾಜೀನಾಮೆ ಕೊಡದೆ ಇದ್ದರೆ ಮುದಿನ ದಿನಗಳಲ್ಲಿ ಮತ್ತೆ ಏಕಾಏಕಿ ಸಿಎಂ ಕುರ್ಚಿ ಅಲುಗಾಡಿಸಲು ಕಾಂಗ್ರೇಸ್ ನಲ್ಲಿಯೆ ಮತ್ತೆ ಕಸರತ್ತು ನಡೆಯಬಹುದು. ಇದೀಗ ಎಲ್ಲರ ಕಣ್ಣು ಕುರ್ಚಿ ಮೇಲೆ ಇದೆ.
0 ಕಾಮೆಂಟ್‌ಗಳು