ಬೆಳ್ತಂಗಡಿ :ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಪಿಯುಸಿ ಹುಡುಗ, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಓದುತ್ತಿದ್ದ ಜೀವಾ ವಿಧಿವಶರಾಗಿದ್ದಾರೆ. ಆಗಸ್ಟ್ 13ರ ಬೆಳಿಗ್ಗೆ ಕಾಲೇಜಿಗೆ ಬೈಕ್ ನಲ್ಲಿ ಹೋಗುವಾಗ ನಡೆದ ಟೆಂಪೋ ಮತ್ತು ಬೈಕ್ ನಡುವಿನ ಭೀಕರ ಅಪರಾಧದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಶ್ರೀಯುತ ಉಮೇಶ್ ಮಂಜೊತ್ತು ಮತ್ತು ಕವಿತಾ ದಂಪತಿಗಳ ಮಗನಾದ ಜೀವ ರವರು ರಸ್ತೆ ಅಪಘಾತಕ್ಕೆ ಈಡಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.
ಬೆಳ್ತಂಗಡಿಯ ಮನೆ ಬಿಟ್ಟು ಸಮೀಪ ಜೀವ ಸಾಗುತ್ತಿದ್ದ ಬೈಕ್ ಮತ್ತು ಟೆಂಪೋ ನಡುವೆ ಆಕ್ಸಿಡೆಂಟ್ ಸಂಭವಿಸಿತ್ತು. ಈ ಭೀಕರ ಅಪಘಾತದಲ್ಲಿ ಜೀವಾ ತೀರಾ ಗಂಭೀರವಾಗಿ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದ ಜೀವಾರಿಗೆ ತಕ್ಷಣ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರನ್ನು ಮಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಜೀವನ್ಮರಣ ಹೋರಾಟದಲ್ಲಿದ್ದ ಅವರು ಇoದು ಮುಂಜಾನೆ ತೀರಿಕೊಂಡಿದ್ದಾರೆ
0 ಕಾಮೆಂಟ್‌ಗಳು